+91 90712 92315 | contact@brahmarishishermitage.org | Find Us
ಅತೀಂದ್ರಿಯ ಆಧ್ಯಾತ್ಮಿಕತೆಯ ಶಕ್ತಿಯನ್ನು ಅನುಭವಿಸಿ
ಬ್ರಹ್ಮಋಷಿಸ್ ಹರ್ಮಿಟೇಜ್
Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis 
                    Divine Soul Guru
Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis 
                    Divine Soul Guru
ಭಗವಾನ್ ಕಲ್ಕಿ | ಬ್ರಹ್ಮಋಷಿಸ್ ಹರ್ಮಿಟೇಜ್

ಭಗವಾನ್ ಕಲ್ಕಿ

Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis
                    Divine Soul Guru Wisdom Positive Quotes

ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವಿನ ಹತ್ತನೇ ಅವತಾರವಾದ ಭಗವಾನ್ ಕಲ್ಕಿಯು ನಮ್ಮ ಭೂಮಿಯ ಮೇಲಿನ ನಕಾರಾತ್ಮಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಮತ್ತು ಸನಾತನ ಧರ್ಮವನ್ನು ಸ್ಥಾಪಿಸಲು ಕಲಿಯುಗದ ಕೊನೆಯಲ್ಲಿ ಹುಟ್ಟುತ್ತಾರೆ. ವಾಸ್ತವವಾಗಿ, ಭಗವಂತ ಈಗಾಗಲೇ ಬಂದಿದ್ದಾರೆ!

ಭಗವಾನ್ ಕಲ್ಕಿಯವರು 1924 ರಲ್ಲಿ ಒಡಿಶಾದ ಸಂಭೂತ ಸಂಬಲ್ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ಕಾಲಾವಧಿಯು ನಮ್ಮದಕ್ಕಿಂತ ಭಿನ್ನವಾಗಿರುವುದರಿಂದ ಅವರು ಈಗ ಇಪ್ಪತ್ತರ ಹರೆಯದಲ್ಲಿದ್ದಾರೆ. ಅವರು ಭಗವಾನ್ ಪರಶುರಾಮ ಹಾಗು ಮಹರ್ಷಿ ಅಶ್ವತ್ಥಾಮರಿಂದ ದೈವಿಕ ಸಾಧನಗಳ ಬಗ್ಗೆ, ಭಗವಾನ್ ಆಂಜನೇಯರಿಂದ 64 ಸಿದ್ಧಿಗಳ ಬಗ್ಗೆ, ವಶಿಷ್ಠ ಮಹರ್ಷಿಗಳಿಂದ ವೇದ ಮತ್ತು ಮೌಲ್ಯಗಳ ಬಗ್ಗೆ, ವಿಶ್ವಾಮಿತ್ರ ಮಹರ್ಷಿಗಳಿಂದ ದಿವ್ಯ ಆಯುಧಗಳು ಮತ್ತು ವಿಭಿನ್ನ ಬ್ರಹ್ಮಾಂಡದ ಶಕ್ತಿಗಳೊಂದಿಗೆ ವ್ಯವಹರಿಸುವ ಬಗ್ಗೆ ಹಾಗು ಮಾರ್ಕಂಡೇಯ ಮಹರ್ಷಿಗಳಿಂದ ಮಾನವೀಯತೆಯ ವಿವಿಧ ಅಂಶಗಳ ಬಗ್ಗೆ ತರಬೇತಿ ಪಡೆದರು. ಈಗ ಶಂಬಲದ ಪ್ರಮುಖ ಮೈತ್ರೇಯರಲ್ಲಿ ಒಬ್ಬರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಳಿ ಮಿಂಚಿನ ವೇಗದಲ್ಲಿ ಚಲಿಸುವ, ರೆಕ್ಕೆ ಹಾಗು ಶೃಂಗವನ್ನು ಹೊಂದಿದ ಶ್ವೇತ ಬಣ್ಣದ ಕುದುರೆ ಇದೆ. ಅವರು ಈ ವಾಹನವನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುತ್ತಾರೆ. ಅವರ ಕೈಯಲ್ಲಿ ಭಗವಾನ್ ಮಹಾದೇವರಿಂದ ಉಡುಗೊರೆಯಾಗಿ ಪಡೆದ ಲೇಸರ್(Laser) ಸ್ತಂಭವಿದ್ದು, ಅದರ ಅಂಚಿನಲ್ಲಿ ಮಾಣಿಕ್ಯವಿದೆ. ಭಗವಾನರು ನಕಾರಾತ್ಮಕ ಶಕ್ತಿಗಳ ನಾಶಕ್ಕಾಗಿ ಇದನ್ನು ಬಳಸುತ್ತಾರೆ. "

ಅನೇಕ ಋಷಿಗಳು ಮತ್ತು ದೈವಿಕ ವ್ಯಕ್ತಿಗಳು (ಮಾನವ ರೂಪದಲ್ಲಿ) ಮೌನವಾಗಿ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಧರ್ಮಗಳ ಆಧ್ಯಾತ್ಮಿಕ ನಾಯಕರು ಸಹ ಈ ಕೆಲಸದ ಒಂದು ಭಾಗವಾಗಿದ್ದಾರೆ. ಅವರ ಅಡಿಯಲ್ಲಿ, ಸದಾಚಾರದ ಶಾಶ್ವತ ಮಾರ್ಗವನ್ನು ಸೂಚಿಸುವ ಶಾಶ್ವತ ಏಕ -ಧರ್ಮದ ಸ್ಥಾಪನೆಯಾಗುತ್ತದೆ. ಸದಾಚಾರವಿಲ್ಲದ, ಅಧರ್ಮದಿಂದ ಅಧಿಕಾರ ಮತ್ತು ಆಡಂಬರದ ಶ್ರೀಮಂತಿಕೆಯಿಂದ ಜೀವನ ನಡೆಸುವವರೆಲ್ಲರೂ ಶೀಘ್ರದಲ್ಲೇ ಕಣ್ಮರೆಯಾಗುತ್ತಾರೆ.

ಭಗವಂತನ ಕೆಲಸ

Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis
                    Divine Soul Guru Wisdom Positive Quotes

ಭಗವಾನ ಕಲ್ಕಿಯವರು ಬೆಳೆಕಿನ ಕಾರ್ಯಕರ್ತ(Light worker)ರ ಒಂದು ಪ್ರಬಲ ಸೈನ್ಯವನ್ನು ಹೊಂದಿದ್ದಾರೆ. ಭಗವಾನ್ ಪರಶುರಾಮರು ಸೈನ್ಯದ ಮಹಾದಂಡನಾಯಕನಾಗಿ ಭಗವಾನ್ ಕಲ್ಕಿಗೆ ಸಹಾಯ ಮಾಡುತ್ತಿದ್ದಾರೆ. ಮಹಾ-ಅವತಾರರು ಸಹ ಅವರ ಕೆಲಸದಲ್ಲಿ ಸಹಾಯಕರಾಗಿರುವ ಪ್ರಬಲ ಶಕ್ತಿಗಳಲ್ಲಿ ಒಬ್ಬರು. ಶಂಬಲದ ಇತರ ಮೈತ್ರೇಯರು ಸಹ ಅವರ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಾರೆ. ನಮ್ಮ ಭೂಮಿಯ ಮೇಲೆ ಯಾವುದೇ ಮಹತ್ವದ ಕ್ರಮ ತೆಗೆದುಕೊಳ್ಳುವ ಮೊದಲು, ಭಗವಾನ್ ಕಲ್ಕಿ, ಸಪ್ತರ್ಷಿಗಳು ಮತ್ತು ಅವರ ಪ್ರಮುಖ ಸಹಚರರೊಂದಿಗೆ ಚರ್ಚಿಸುತ್ತಾರೆ.

ಭಗವಂತನ ಅಡಿಯಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಅವರ ಸೈನ್ಯದ ಭಾಗವಾಗುವುದು ಸುಲಭವಲ್ಲ. ಸನ್ಮಾರ್ಗವನ್ನು ಒಪ್ಪಿಕೊಂಡು ಕೆಲಸ ಮಾಡಬೇಕು. ವಿನಾಶದ ಉದ್ದೇಶಗಳಿಗಾಗಿ ಭಗವಂತ ಅನೇಕ ಸಂದರ್ಭಗಳಲ್ಲಿ ಬೆಳಕಿನ ಆಯುಧಗಳನ್ನು ಬಳಸಿದ್ದಾರೆ. ಅವರು ತಮ್ಮ ಕ್ರಾಂತಿಕಾರಿ ಕೆಲಸವನ್ನು ಸಣ್ಣ ರೀತಿಯಲ್ಲಿ ಪ್ರಾರಂಭಿಸಿದ್ದಾರೆ.

ಅನೇಕ ಋಷಿಗಳು ಮತ್ತು ದೈವಿಕ ವ್ಯಕ್ತಿಗಳು (ಮಾನವ ರೂಪದಲ್ಲಿ) ಮೌನವಾಗಿ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಧರ್ಮಗಳ ಆಧ್ಯಾತ್ಮಿಕ ನಾಯಕರು ಸಹ ಈ ಕೆಲಸದ ಒಂದು ಭಾಗವಾಗಿದ್ದಾರೆ. ಅವರ ಅಡಿಯಲ್ಲಿ, ಸದಾಚಾರದ ಶಾಶ್ವತ ಮಾರ್ಗವನ್ನು ಸೂಚಿಸುವ ಶಾಶ್ವತ ಏಕ -ಧರ್ಮದ ಸ್ಥಾಪನೆಯಾಗುತ್ತದೆ. ಸದಾಚಾರವಿಲ್ಲದ, ಅಧರ್ಮದಿಂದ ಅಧಿಕಾರ ಮತ್ತು ಆಡಂಬರದ ಶ್ರೀಮಂತಿಕೆಯಿಂದ ಜೀವನ ನಡೆಸುವವರೆಲ್ಲರೂ ಶೀಘ್ರದಲ್ಲೇ ಕಣ್ಮರೆಯಾಗುತ್ತಾರೆ.

ಭಗವಾನ್ ಕಲ್ಕಿಯ ಒಡನಾಡಿಗಳು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಸರಿಯಾದ ಜನರು ಅಧಿಕಾರಕ್ಕೆ ಬರಲು, ಆರ್ಥಿಕವಾಗಿ ಸದೃಢರಾಗಲು ಮತ್ತು ಸದಾಚಾರದ ಹಾದಿಯಲ್ಲಿ ಬೆಳೆಯಲು ಸಹಾಯ ಮಾಡುತ್ತಾರೆ. ಮಾರ್ಕಂಡೇಯ ಮಹರ್ಷಿ ಮತ್ತು ವಿಶ್ವಾಮಿತ್ರ ಮಹರ್ಷಿಗಳು ಯುರೋಪ್ ಖಂಡದಲ್ಲಿ ಕೆಲಸ ಮಾಡುತ್ತಿದ್ದಾರೆ; ಶಂಬಲದ ಭಗವಾನ್ ಮೈತ್ರೇಯ, ಭಗವಾನ್ ಪರಶುರಾಮ ಮತ್ತು ಮಹರ್ಷಿ ಅಶ್ವತ್ಥಾಮ ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಖಂಡದಲ್ಲಿ ಕೆಲಸ ಮಾಡುತ್ತಿದ್ದಾರೆ; ವಶಿಷ್ಠ ಮಹರ್ಷಿ, ಮಹಾ-ಅವತಾರ, ಭಗವಾನ್ ಆಂಜನೇಯ ಮತ್ತು ಭಗವಾನ್ ಕಲ್ಕಿ ಸ್ವತಃ ಏಷ್ಯಾ ಮತ್ತು ಅಮೇರಿಕಾ ಖಂಡಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಎಲ್ಲಾ ಮಹಾನ್ ದೈವಿಕ ಜೀವಿಗಳು ಹಳೆಯ ಕಾರ್ಯ ವ್ಯವಸ್ಥೆಗಳನ್ನು ಬದಲಾಯಿಸಲು ಮತ್ತು ಜಗತ್ತನ್ನು ಪರಿವರ್ತಿಸಲು ಹೊಸ ವ್ಯವಸ್ಥೆಗಳನ್ನು ತರಲು ನಿರಂತರ ಕೆಲಸ ಮಾಡುತ್ತಿದ್ದಾರೆ. ಪ್ರಪಂಚದಾದ್ಯಂತ ಕ್ರಮೇಣ ಆರ್ಥಿಕ ರೂಪಾಂತರವು ನಡೆಯುತ್ತಿದೆ, ಹಾಗೆಯೇ ಶೈಕ್ಷಣಿಕ ಮತ್ತು ರಾಜಕೀಯ ವ್ಯವಸ್ಥೆಗಳಲ್ಲಿಯೂ ಸಹ. ಶೀಘ್ರದಲ್ಲೇ, ಪ್ರಸ್ತುತ ಔಷಧೀಯ ವ್ಯವಸ್ಥೆಯು ಕುಸಿಯುತ್ತದೆ ಮತ್ತು ಹೊಸ ಚಿಕಿತ್ಸೆ ಮತ್ತು ಪರ್ಯಾಯ ವೈದ್ಯಕೀಯ ವ್ಯವಸ್ಥೆಯನ್ನು ಪರಿಚಯಿಸಲಾಗುವುದು.

ಮೂಲಭೂತ ಬೋಧನೆಗಳು

Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis
                    Divine Soul Guru Wisdom Positive Quotes

ಯಾವಾಗಲೂ ಸತ್ಯವಂತರಾಗಿರಿ ಮತ್ತು ಹೆಚ್ಚು ಜಾಗೃತರಾಗಿರಿ. ನಿಮ್ಮನ್ನ ನೀವು ಪ್ರೀತಿಸಿ.

ನಿಮ್ಮ ಮೂಲಕ ಸಾರ್ವತ್ರಿಕ ಶಕ್ತಿಯ ಹರಿವು ಯಾವಾಗಲೂ ಇರುವುದರಿಂದ ನಿಮ್ಮ ಕ್ರಿಯೆಗಳು, ಆಲೋಚನೆಗಳು ಮತ್ತು ಭಾವನೆಗಳನ್ನು ಧನಾತ್ಮಕಗೊಳಿಸಿ. ನೀವು ಇದನ್ನು ತಿಳಿದಾಗ ಧನಾತ್ಮಕತೆ ತೀವ್ರವಾಗುತ್ತದೆ.

ಅಹಂ, ಭಯ, ಕೋಪ, ಅಸೂಯೆ, ಬಾಂಧವ್ಯ, ದುರಾಸೆ, ಕಾಮ ಮತ್ತು ಆಸೆಗಳಂತಹ ನಿಮ್ಮ ಸ್ವಂತ ನಕಾರಾತ್ಮಕತೆಯನ್ನು ನಿವಾರಿಸಿ. ಅವುಗಳನ್ನು ಹಿಡಿದಿಟ್ಟುಕೊಳ್ಳುವುದು ನಿಮ್ಮನ್ನು ನಾಶಪಡಿಸುತ್ತದೆ.

ನೆಮ್ಮದಿ ಮತ್ತು ನಮ್ರತೆಯನ್ನು ಬೆಳೆಸಿಕೊಳ್ಳಿ. ಸತ್ಯ, ಪ್ರೀತಿ, ಕೃತಜ್ಞತೆ, ತಾಳ್ಮೆ ಮತ್ತು ಪರಿಶ್ರಮವನ್ನು ಅಭ್ಯಾಸ ಮಾಡಿ. ಆನಂದಮಯವಾಗಿರಿ.

ಕ್ಷಮಿಸಿ ಮತ್ತು ಒಪ್ಪಿಕೊಳ್ಳಿ. ನೀವು ಯಾರೆಂದು ಭಾವಿಸಿದ್ದೀರಿ ಎಂಬುದನ್ನು ಬಿಟ್ಟುಬಿಡಿ ಮತ್ತು ನೀವು ಯಾವಾಗಲೂ ಇದ್ದಂತೆ ಇರಿ.

ನಿಮ್ಮ ಜೀವನದ ಗುರಿ ಸ್ವಯಂ ಸಾಕ್ಷಾತ್ಕಾರವಾಗಿರಬೇಕು (ಆತ್ಮ-ಸಾಕ್ಷಾತ್ಕಾರ).

ಸಂಬಂಧಿತ ವೀಡಿಯೊಗಳು